ಬುಧವಾರ, ಜುಲೈ 2, 2014

ಕವಿಮಿತ್ರನಿಗೆ ಶ್ರದ್ದಾ೦ಜಲಿ

ಕವಿಮಿತ್ರನಿಗೆ ಶ್ರದ್ದಾ೦ಜಲಿ
ಓ ವೀರೇಶ
ಓ ವೀರೇಶ ನೀ ಕಾಣದ ಲೋಕಕೆ ಬಹುಬೇಗ ಹಾರಿಹೋದೆ!
ನನ್ನ ಕೈಗಳು ಅದೇಕೋ ನಡಗುತ್ತಿವೆ ಇ೦ದು!
ಅದೇನೆಲ್ಲಾ ಕನಸುಗಳಿದ್ದವೋ! ಅದೇನೆಲ್ಲಾ ಬಯಸಿದ್ದವೋ !
ಆ ಕಾಲನ ಮು೦ದೆ ನಾವೆಲ್ಲಾ ಕ್ಷಣಮಾತ್ರವು!
ಅನ್ನಿಸಿತು ನಿನ್ನ ಅಕಾಲಮೃತ್ಯು!
ನಾಗಲಕ್ಷ್ಮಿಗೆ ಒಡೆಯನಾಗಿದ್ದ ನೀನು
ಆಕೆಯನ್ನು ದುಃಖದ ಕಡಲಿಗೆ ದೂಡಿ
ಅದೇಕಿಷ್ಟು ಬೇಗ ನೇಪಥ್ಯಕ್ಕೆ ಸರಿದೆ?!
ಅಂದು ಬೆಂಗಳೂರಿನಲ್ಲಿ ನಾ ಮೊದಲು
ನಿನ್ನನ್ನೇ ಕವಿಗೋಷ್ಠಿಯಲ್ಲಿ ಕಂಡದ್ದು!
ಅದೂ ಪ್ರತಿಭಾಸ್ಪಂದನದಲ್ಲಿ!
ಆ ನಿನ್ನ ಬೊಗಸೆಕಂಗಳು
ಅದೇನೆಲ್ಲಾ ಮಿಂಚು ಹೊರಸೂಸುತ್ತಿತ್ತು
ನಿನ್ನ ಉಜ್ವಲ ಭವಿಷ್ಯವನ್ನು ಹೊರಹಾಕುತ್ತಿತ್ತು
ಆ ನಿನ್ನ ಜಾನಪದ ಗೀತೆಗಳ ಹಾಡುವ ಪರಿ
ನಮ್ಮನೆಲ್ಲಾ ಯಾವುದೋ ಲೋಕಕ್ಕೆ ಕರೆದೊಯ್ಯುತ್ತಿತ್ತು
ಸಾಹಿತ್ಯಲೋಕಕ್ಕೆ ನಿನ್ನ ಕಾರ್ಡಿನಲ್ಲಿ ಕವನ,ರೈಲಿನಲ್ಲಿ ಕವಿಗೋಷ್ಠಿ,
ನಿಜಕ್ಕೂ ನೀನು ಹಾಕಿಕೊಟ್ಟ ಹೊಸ ಆಯಾಮವಾಗಿತ್ತು!
ಓ ವೀರೇಶ್ ಸಾಹಿತ್ಯ ಸಾಧನೆಯನ್ನು
ಗುರಿಮುಟ್ಟಿರುವುದಕ್ಕೆ ನಿನ್ನ ಪಿ.ಎಚ್.ಡಿ ಪದವಿಯೇ ಸಾಕ್ಷಿ!!
ಬಳ್ಳಾರಿಯಲ್ಲಿ ಹುಟ್ಟಿ, ದಳ್ಳುರಿಯಲ್ಲಿ ಬೆಂದು,
ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ನಿಮ್ಮ ಸೇವೆ ಕಂಡು
ಆ ಜವರಾಯನೂ ಅಸೂಯೆ ಪಟ್ಟನೇನೋ!!
ನಿನ್ನೊಡನೆ ಅಂದು ಸಾಹಿತ್ಯಪರಿಷತ್ತಿನಲ್ಲಿ
ನಾನು ಒಂದು ವಾರವಿದ್ದೆ
ನಾವೀರ್ವರೂ ಸಾಹಿತ್ಯ ಚಟುವಟಿಕೆಗಳನ್ನು
ತರಬೇತಿಯಲ್ಲಿ ಹಂಚಿಕೊಂಡಿದ್ದೆವು!!
ನಿನಗೆ ಈ ಓಲೆಯಲ್ಲಿ ನನ್ನ ಸವಿನೆನಪುಗಳನ್ನು
ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಕುವರಯಲ್ಲಪ್ಪನವರಿಗೆ
ವಂದನೆಯನ್ನು ಅರ್ಪಿಸುತ್ತಾ
ಈ ವೀರೇಶನ ನುಡಿನಮನಕ್ಕೆ
ಪೂರ್ಣವಿರಾಮ ಹಾಕುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ