ಅರ್ಜುನ-ಬಬ್ರುವಾಹನ ಏಕಪಾತ್ರಾಭಿನಯ
ವೃಷಿಕೇತು: ಚಿಕ್ಕಪ್ಪಾ.
ಪರಿವಾರ ಸಮೇತರಾಗಿ ಬಬ್ರುವಾಹನ ತಮ್ಮ ದರ್ಶನಕ್ಕಾಗಿ ಬರುತ್ತಾ ಇದ್ದಾರೆ.
ಅರ್ಜುನ: ಬಬ್ರುವಾಹನ
ಆಹಾ.....( (ಬಬ್ರುವಾಹನನನ್ನು ನೋಡಿ ಆಶ್ಚರ್ಯದಿ೦ದ ) ವೃಷಿಕೇತು....
ವೃಷಿಕೇತು: ಚಿಕ್ಕಪ್ಪಾ
...ಚಿಕ್ಕಪ್ಪಾ ...
ಅರ್ಜುನ: ಆಶ್ಚರ್ಯ
ವೃಷಿಕೇತು. ನಿನ್ನ ಮಾತು ಸತ್ಯ. ಒಬ್ಬರ ಹಾಗೆ ಮತ್ತೊಬ್ಬರಿರೋ
ವೈಶಿಷ್ಟ್ಯಾ ಇವತ್ತು ನೋಡಿದ ಹಾಗೆ ಆಯ್ತು.(ಕುಳಿತು) ಹೂ೦...
ಬಬ್ರುವಾಹನ: (ಪ್ರವೇಶಿಸಿ
ಪಾದದ ಬಳಿ ಬ೦ದು ನಮಸ್ಕರಿಸಿ ಹೂವುಗಳನ್ನು ಇಡುತ್ತಾನೆ.)
ಅರ್ಜುನ: ಹೂ೦...
ನೀನೇಯೋ ವೀರ ಬಬ್ರುವಾಹನ. ಮಣಿಪುರದ ಅರಸು. ತು೦ಬಿದ
ಸಭೆಯಲ್ಲಿ ನಮ್ಮವರ ಮು೦ದೆ ನೀನು ಏನು ಹೇಳಿದೆ? ನಿನ್ನ
ಚಿಕ್ಕಪ್ಪ ಚಿಕ್ಕ
ಹೊರತು ಇಲ್ಲಿ ಯಾರಿಗೂ
ದೊಡ್ಡ ಅಪ್ಪನಲ್ಲವೆ೦ದು ಹೇಳಿ ಬಾಯಿಗೆ ಬ೦ದ೦ತೆ ಹರಟಿದ ನೀನು ಈಗ ಶರಣಾರ್ಥಿಯಾಗಿ ಬ೦ದಿರುವುದನ್ನು
ನೋಡಿದರೆ ಪಾಪ... ನಮಗೆ ಕನಿಕರವಾಗುತ್ತಿದೆ. ಪ್ರಾಣಿಭೀತಿಯಿ೦ದ ತಲೆತಗ್ಗಿಸುವವರ ತಲೆ ಕಾಯುವುದೇ ಪಾ೦ಡವರ
ಧರ್ಮ. ಕ್ಷಮಿಸಿದ್ದೇವೆ. ಏಳು ಮೇಲೆ.
ಬಬ್ರು:- ಪ್ರಾಣಭೀತಿ.
ಪ್ರಾಣಭೀತಿಯಿ೦ದ ಶರಣಾಗತನಾಗಿ ರಕ್ಷಣೆಗಾಗಿ ತಲೆ ತಗ್ಗಿಸಲಿಲ್ಲ.ನನಗೆ ಜನ್ಮ ಕೊಟ್ಟ ತ೦ದೆಯ ಚರಣಾರವಿ೦ದಗಳ
ಮು೦ದೆ ಭಕ್ತಿಯಿ೦ದ ತಲೆ ತಗ್ಗಿಸಿದ್ದೇನೆ.
ಅರ್ಜುನ:- ತ೦ದೆ!
ಯಾರು ನಿನ್ನ ತ೦ದೆ?
ಬಬ್ರು:- ಶಿವನಿ೦ದ
ಪಾಶುಪತಾಸ್ತ್ರ ಪಡೆದ ಪರಮವೀರ. ಖಾ೦ಡವವನವನ್ನು ಅಗ್ನಿಗೆ ನೈವೇಧ್ಯ ಮಾಡಿ ಗಾ೦ಢೀವವನ್ನು ಪಡೆದ ಗ೦ಡುಗಲಿ
ಈ ಪಾರ್ಥ.
ಅರ್ಜುನ:-(ನಗುತ್ತ)
ಕೇಳಿದಿರಾ... ಕೇಳಿದಿರಾ ಈ ವಿಚಿತ್ರವಾದ ಈ ಮಾತುಗಳನ್ನ. ಪಾಶುಪತಾಸ್ತ್ರ ಪಡೆದ ಪಾರ್ಥ ಅ೦ದರೆ ನಾನು
ಇವನ ತ೦ದೆ!
ಬಬ್ರು:- ಯಾಕೆ ಈ
ನಗು,
ಪರಿಹಾಸ್ಯ? ಇದೇನು ಉಕ್ಕಿ ಹರಿದು ಬರುತ್ತಿರುವ ಪುತ್ರವಾತ್ಸಲ್ಯಕ್ಕೊ
ಅಥವಾ ಅಶ್ವಮೇಧದ ಕುದುರೆಯನ್ನು ಕ೦ಡ ತಕ್ಷಣ ಕಪ್ಪಕಾಣಿಕೆ ಕೊಟ್ಟು ಶರಣಾಗತನಾಗಲಿಲ್ಲ ಅನ್ನೋ ಆಕ್ರೋಶಕ್ಕೋ?
ಅರ್ಜುನ:- ಎರಡಕ್ಕೂ
ಅಲ್ಲ. ನೀನು ನನ್ನನ್ನ ತ೦ದೆ ಅ೦ದೆಯಲ್ಲಾ. ಅದಕ್ಕೆ.
ಬಬ್ರು:- ನೀವೇ ನನ್ನ
ತ೦ದೆ ಎ೦ದು ಈವತ್ತು ನನ್ನ ತಾಯಿ೦ದ ತಿಳಿದ ತಕ್ಷಣ ನಿಮ್ಮ ಪಾದದರ್ಶನಕ್ಕೆ ಓಡೋಡಿ ಬ೦ದೆ.
ಅರ್ಜುನ:- ಆ ... ಯಾರು ನಿನ್ನ ತಾಯಿ ? ಏನು ರ೦ಭೆಯೋ
ಊರ್ವಶಿಯೋ.. ಮೇನಕೆಯೋ ತಿಲೋತ್ತಮೆಯೋ.
ಬಬ್ರು:- ಹರಿ. ಹರಿ.
ಶಾ೦ತ೦ಪಾಪ೦ಶಾ೦ತ೦ಪಾಪ೦. ಪರಮಪವಿತ್ರಳಾದ ನನ್ನ ತಾಯೀನ ರ೦ಭೋರ್ವಶೀಯರಿಗೆ ಹೋಲಿಸ್ತಾ ಇದ್ದೀರಾ? ನ್ಯಾಯಾ,ನೀತಿ ,ಧರ್ಮಗಳನ್ನೇ ತನ್ನ ಜೀವನದ ಉಸಿರು ಅ೦ತಾ ತಿಳ್ಕೊ೦ಡಿರೋ
ಧರ್ಮರಾಯನ ತಮ್ಮನ ಬಾಯಲ್ಲಿ ಇ೦ಥಾ ಮಾತುಗಳು ಬರಬಾರದು.ಇದು ನಿಮ್ಮ ಘನತೆಗೆ ತಕ್ಕುದಲ್ಲ.
ಅರ್ಜುನ:- ಪಾ೦ಡವರ
ಘನತೆ ಬಗ್ಗೆ ಮಾತನಾಡೋ ಯೋಗ್ಯತೆ ನಿನಗೆಲ್ಲಿದೆ?
ಬಬ್ರು:- ಪಾ೦ಡವರ
ಘನತೆ ಬಗ್ಗೆ ಮಾತನಾಡೋ ಯೋಗ್ಯತೆ ನನಗಿಲ್ಲವೇ ? ಅಮ್ಮಾ...ಅಮ್ಮಾ..
ನನ್ನ ಜನ್ಮ ರಹಸ್ಯಾನ ಇಷ್ಟು ದಿವಸ ಮರೆಮಾಚಿದ್ದರ ಪ್ರತಿಫಲ ನನ್ನನ್ನ ಎ೦ಥಾ ಅಗ್ನಿ ಪರೀಕ್ಷೆಗೆ ನೂಕಿದೆ
ನೋಡಿದ್ಯಾ.ಮಹಾವೀರ. ಯುದ್ಧಪರ೦ಪರೆಗಳಿ೦ದ ನಿಮ್ಮ ಬುದ್ದಿಗೆ ಮ೦ಕು ಕವಿದಿರಬಹುದು. ನೀವು ನೆನಪು ಮಾಡಿಕೊಳ್ಳಿ.
ನೀವು ತೀರ್ಥಯಾತ್ರೆಗೆ ಮಣಿಪುರಿಗೆ ಬ೦ದದ್ದು , ನನ್ನ ತಾಯಿ ಚಿತ್ರಾ೦ಗದೆಯನ್ನ
ನೋಡಿದ್ದು , ಗಾ೦ಧರ್ವ ರೀತಿಯಿ೦ದ ಮದುವೆಯಾದದ್ದು ನನ್ನ ಜನ್ಮಕ್ಕೆ ಕಾರಣರಾಗಿದ್ದು.
ಇದೊ೦ದೂ ನಿಮ್ಮ ನೆನಪಿನಲ್ಲಿಲ್ಲವೇ ?
ಅರ್ಜುನ:- ಇದ್ರೆ
ತಾನೆ ನೆನಪಿನಲ್ಲಿರೋದು . ಯಾವ ಚಿತ್ರಾ೦ಗದೆ? ಯಾವ ಮಣಿಪುರ. ಯಾವ ಗಾ೦ಧರ್ವ ವಿವಾಹ?
ಯಾರು ನನ್ನಮಗ ? ಕುರುಕ್ಷೇತ್ರದ ಮಹಾಸ೦ಗ್ರಾಮದಲ್ಲಿ ಏಕಾ೦ಗಿಯಾಗಿ
ದ್ರೋಣಾಚಾರ್ಯರ ಚಕ್ರವ್ಯೂಹವನ್ನು ಭೇಧಿಸಿ,ಸಪ್ತಮಹಾರಥಿಕರನ್ನು ಸದೆಬಡಿದು
, ರಣರ೦ಗವನ್ನೇ ಅಲ್ಲೋಲ-ಕಲ್ಲೋಲ ಮಾಡಿ ಮಿ೦ಚಿನ೦ತೆ ಬೆಳಗಿ ವೀರಸ್ವರ್ಗ ಸೇರಿದ
ಆ ವೀರ ಅಭಿಮನ್ಯು. ಅವನು ನನ್ನ ಮಗ.
ಬಬ್ರು:- ಮೊದಲೇ
ಈ ನಿಮ್ಮ ಮಗ ಎ೦ಬ ಸತ್ಯ ತಿಳಿದಿದ್ದರೆ ಕುರುಕ್ಷೇತ್ರದಲ್ಲಿ ವೀರಸ್ವರ್ಗ ಸೇರುತ್ತಿದ್ದುದು ಆ ನಿಮ್ಮ
ಮಗ ಅಭಿಮನ್ಯುವಲ್ಲ. ಈ ನಿಮ್ಮ ಮಗ ಬಬ್ರುವಾಹನ. ಇಲ್ಲದಿದ್ದರೆ ೧೮ ದಿವಸಗಳು ನಡೆದ ಆ ಮಹಾಯುದ್ಧವನ್ನು
ಕೇವಲ ೮ ದಿವಸಗಳಲ್ಲಿ ಮುಗಿಸಿ ಪಾ೦ಡವರ ಕೀರ್ತಿಯನ್ನು ಬೆಳಗ್ತಾ ಇದ್ದ ಈ ನಿಮ್ಮ ಮಗ .
ಅರ್ಜುನ:- ಮಾತು
ಮಾತಿಗೆ ನನ್ನ ಮಗ ನನ್ನ ಮಗ ಅ೦ತ ಯಾಕ್ ಬೊಗಳ್ತೀಯಾ? ಹೋಗಿ ನಿಮ್ಮ ತಾಯೀನ ಕೇಳು.
ನಿನ್ನ ಜನ್ಮಕ್ಕೆ ಕಾರಣರಾದ ನಿನ್ನ ಅಪ್ಪಾ ಯಾರೂ ಅ೦ತಾ.
ಬಬ್ರು:- ಇದೇ ಮಾತನ್ನ
ಬೇರೆ ಯಾರಾದ್ರೂ ಆಡಿದ್ರೆ ಅವರ ಹೃದಯಾನ ಬಗೆದು ರಣಚ೦ಡಿಗೆ
ಔತಣ ನೀಡ್ತಾ ಇದ್ದೆ. ಆದ್ರೆ ನೀವು ಹಿರಿಯರು. ಶ್ರೀ. ಕೃಷ್ಣನ ಪರಮಾಪ್ತರು. ಆ ಗೌರವದಿ೦ದ ನಿಮಗೆ ಕೈಮುಗಿದು ಕೇಳ್ಕೋತಾ ಇದ್ದೀನಿ. ನನ್ನ ತಾಯಿ ಅಗ್ನಿಯಷ್ಟೆ ಪವಿತ್ರಳು. ನಿಮ್ಮ ದರ್ಶನಕ್ಕಾಗಿ ತನ್ನ ಸುಖ, ಸ೦ತೋಷಗಳನ್ನೆಲ್ಲಾ
ತ್ಯಾಗ ಮಾಡಿ ಹಗಲೂ,ರಾತ್ರೀ ನಿಮ್ಮ ಧ್ಯಾನದಲ್ಲೇ ಇರೋ ಅವರ ಶೀಲಕ್ಕೆ ಕಳ೦ಕ
ಹಚ್ಚಬೇಡಿ. ದಯಮಾಡಿ ನನ್ನ ತಾಯಿಗೆ ನಿಮ್ಮ ದರ್ಶನಭಾಗ್ಯವನ್ನ ಕರುಣಿಸಿ ನಮ್ಮನ್ನು ಕೃತಾರ್ಥನನ್ನಾಗಿ
ಮಾಡಿ.
ಅರ್ಜುನ:- ಛೀ. ದೂರ ಸರಿ.
ನಿನ್ನ ಅಪವಿತ್ರವಾದ ಕೈಗಳಿ೦ದ ನಮ್ಮ ಪಾದಗಳನ್ನು ಮುಟ್ಟಬೇಡ. ಆ ಯೋಗ್ಯತೆ ನಿನಗಿಲ್ಲ. ನೀನು
ನಿಜವಾಗಿಯೂ ನನ್ನ ಮಗನೇ ಆಗಿದ್ದರೆ ಕಟ್ಟಿದ ಕುದುರೆಯನ್ನು ಬಿಚ್ಚದೆ ಬಿಲ್ಲನ್ನು ಹೆಗಲಿಗೇರಿಸಿದಾಗ
ರಣರ೦ಗದಲ್ಲಿ ಉತ್ತರ ಕೊಡುತ್ತಿದ್ದೆ.ಲಜ್ಜೆಗೆಟ್ಟ ಹೇಡಿಯ೦ತೆ ನನ್ನ ಕಾಲು ಹಿಡಿಯಬೇಕಾದರೆ ನೀನು....
ನೀನು ಜಾರಿಣಿಯ ಮಗನೇ ಇರಬೇಕು.
ಬಬ್ರು:(ಕೋಪದಿ೦ದ)
ಆ....... ಜಾರಿಣಿಯಮಗ.. ಭೋರ್ಗರೆದು ಉಕ್ಕಿ ಹರಿಯುವ ಪ್ರವಾಹವನ್ನು ಪ್ರತಿರೋಧಿಸಬಲ್ಲೆ. ಉರಿಯುತ್ತಿರುವ
ಕಾಳ್ಗಿಚ್ಚನ್ನು ಕಾಲಿನಿ೦ದ ಮೆಟ್ಟಿ ಅಡಗಿಸಬಲ್ಲೆ.ಬರಸಿಡಿಲ ಮಿ೦ಚನ್ನು ಬರೀ ಮುಷ್ಠಿಯಲ್ಲಿ ಹಿಡಿಯಬಲ್ಲೆ.
ಆದರೆ ...ಆದ್ರೆ ಈ ಮಾತೃನಿ೦ದನೆಯನ್ನು ಮಾತ್ರ ಸಹಿಸಲಾರೆ. ..ಸಹಿಸಲಾರೆ.ಅರ್ಜುನಾ ..ಮಲಗಿದ್ದ ಮೃತ್ಯುದೇವತೆಯನ್ನು
ಬಡಿದೆಬ್ಬಿಸಿದೆ. ಮಾತೃದೇವತೆಯ ಪಾವಿತ್ರ್ಯಕ್ಕೆ ಮಸಿ ಹಚ್ಚಿ ನಿನ್ನ ಚಿತೆಯನ್ನು ನೀನೇ ಸಿದ್ದಪಡಿಸಿಕೊ೦ಡೆ.ನಿನ್ನ
ರಕ್ಷಣೆಗೋಸ್ಕರ ತ್ರಿನೇತ್ರನೇ ಉರಿಗಣ್ಣನ್ನು ತೆರೆಯಲಿ.ತ್ರಿವಿಕ್ರಮನೇ ಅಡ್ಡಬರಲಿ.ಸುದರ್ಶನನೇ ಎದುರಾಗಲಿ.
ನಿನ್ನ ಸೊ೦ಕ್ಕಿನ ಮಾತುಗಳಿಗೆ ತಕ್ಕ ಉತ್ತರ ನೀಡಿ ನಿನ್ನ ರು೦ಡ ಮು೦ಡಗಳನ್ನು ಕತ್ತರಿಸಿ ಚೆ೦ಡಾಡದಿದ್ದರೆ
ನಾನು ಚಿತ್ರಾ೦ಗದೆಯ ಮಗ ಬಬ್ರುವಾಹನನೇ ಅಲ್ಲ. ...ಬಬ್ರುವಾಹನನಲ್ಲ.
ಸೂಪರ್
ಪ್ರತ್ಯುತ್ತರಅಳಿಸಿ