ಬುಧವಾರ, ಜುಲೈ 2, 2014

ಸಂಪತ್ತಿಗೆಸವಾಲ್

ನೀನ್ ಯಾವೋನ್ ನಂಗೆ ಹೇಳೋಕೆ

ನೀನ್ ಯಾವೋನ್ ನಂಗೆ ಹೇಳೋಕೆ.ಬಾಯ್ ಮುಚ್ಕೋಂಡ್ ನಿಂತ್ಕೋ ಅಲ್ಲಿ. ಸಾವ್ಕಾರ್ ಸಿದ್ದ. ನಮ್ಮನೇಗ್ ಬಂದ್ ನೀನು ಏನ್ ಹೇಳ್ದೆ. ಏನ್ ಹೇಳ್ದೆ. ನಮ್ಮನೇಗೆ ಬಂದು, ನಾನು ನಿನ್ನ ಮಗಳ್ನ ಕೆಡಿಸೋದಿಕ್ಕೆ ಪ್ರಯತ್ನ ಪಟ್ಟೆ ಅಂತಾ ತಾನೆ. ಏ ದುರ್ಗಿ. ನಿನ್ನನ್ನ ನಾನು ಅತ್ಯಾಚಾರಾ ಮಾಡೋದಿಕ್ಕೆ ಬಂದಿದ್ನಾ. ಬೊಗಳು. ಇಲ್ಲ ತಾನೆ.(ತಲೆ ಅಲ್ಲಾಡಿಸುವಳು)ಕೇಳಿದ್ಯಾ.ಸಾವ್ಕಾರಾ. ನೀನೇನ್ ಯೋಚ್ನೆ ಮಾಡ್ಬೇಡ. ನೀನು ನಮ್ಮನೇಗ್ ಬಂದು ಸುಳ್ಳು ಹೇಳಿದ್ದೀಯಾ. ಈಗ ನಾನು ಅದನ್ನ ನಿಜ ಮಾಡೋಕೆ ಬಂದಿದ್ದೀನಿ. ನಾನೀವಾಗ ಮನೆ ಬಿಟ್ಟು ಹೊರಗೆ ಬಂದಿದ್ದೀನಿ. ನನ್ನ ತಡೆಯೋರು ಯಾರೂ ಇಲ್ಲಾ. ಹಿಡ್ಕೋಂಡಿದ್ದೀನಿ ನಿನ್ನ ಮಗಳ್ನ.ಬಿಡಿಸ್ಕೋಬಾ. ಸಿದ್ದ ಬಾ. ಯಾಕ್ ಸುಮ್ನಾಗ್ ಬಿಟ್ಟೆ. ಬಾಯ್ ಕಟ್ಟೋಯ್ತಾ ನಿಂಗೆ. ಏನ್ ಒಳ್ಳೆ ಹೆಬ್ಬಾವು ಬುಸುಗುಟ್ಟೋ ಹಾಗೆ ಬುಸ್ ಗುಟ್ತಾ ಇದ್ದೀಯಲ್ಲಾ. ಓಹೋ. ಅವ್ಮಾನ ಆಗೋಯ್ತು. ಅಂತಾ ಯೋಚ್ನೆ ಮಾಡ್ತಾ ಇದ್ದೀಯೇನೋ ಪಾಪ. ನನ್ನ ಮಗಳ್ನ ಕೆಡಿಸೋದಿಕ್ಕೆ ಪ್ರಯತ್ನಪಟ್ಟ ಅಂತಾ ಸುಳ್ಳು ಹೇಳಿದ್ದೀಯಲ್ಲಾ. ನನ್ನ ತಾಯತ್ರ. ಅವರೆಷ್ಟು ಸಂಕಟ ಪಟ್ಟು ಮನೆಯಿಂದ ಆಚೆ ಕಳಿಸಿದ್ರು ಅಂತಾ ನೀನ್ ಯೋಚ್ನೆ ಮಾಡಿದ್ದೀಯಾ. ಬಾರಿ ದೊಡ್ಡ ಗಂಡ್ಸು ನೀನು. ಕರ್ಕೋ ನಿನ್ನ ಮಗಳ್ನ. ನೀನ್ ಹಲ್ಕ ಕೆಲಸ ಮಾಡ್ದೆ  ಅಂತಾ ನಾನ್ ಮಾಡೋಕೆ ಹೋದ್ರೆ ನಿಂಗೂ ನಂಗೂ ವ್ಯತ್ಯಾಸ ಏನಿದೆ ಸಾವ್ಕಾರಾ. ಜ್ಝಾಪಕ ಇಟ್ಕೋ.ಯಾವ ಹಣದ ಅಮಲಿನಿಂದ ನೀನು ಬಡವರ್ನ ಗೋಳಾಡಿಸ್ತಾ ಇದ್ದೀಯೋ, ಯಾವ ಸಂಪತ್ತಿನಿಂದ ಸೊಕ್ಕಿ ಅನ್ಯಾಯ ಅಕ್ರಮಗಳ್ನ ಮಾಡ್ತಾ ಬಡುವರ್ನ ಪಶುಗಳ ಹಾಗೆ ಕಾಣ್ತಾ ಇದ್ದೀಯೋ. ಆನಿನ್ನ ಸಂಪತ್ತಿಗೆ ನನ್ನ ಸವಾಲ್. ಈವತ್ತಲ್ಲ ನಾಳೆ ಅಯ್ಯೋ ಹೀಗಾಯ್ತಲ್ಲಾ ಅಂತಾ ನೀನು ಗೋಳಾಡೋ ಹಾಗೆ ನಾನ್ ಮಾಡ್ಲಿಲ್ಲ. ನನ್ನ ಹೆಸ್ರು ಬದ್ರ ಅಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ