ಶನಿವಾರ, ಜುಲೈ 5, 2014

ವರನೀಡು ವಿಘ್ನೇಶ್ವರ

ವರನೀಡು ವಿಘ್ನೇಶ್ವರ

ವರನೀಡು ವಿಘ್ನೇಶ್ವರ ಗೌರೀಸುತನೇ ವಿಘ್ನವಿನಾಶನೆ
ಕರಮುಗಿದು ನಿನ್ನ ಸನಿಹಕೆ ಬ೦ದಿಹೆ!
ಶರಣರ ಸಲಹುವ ಸಕಲರ ನಿಧಿಯೇ
ಬೇಡಿದ ವರಗಳ ದಯಪಾಲಿಸು ನೀ!!
ನಿನ್ನಯ ಮಸ್ತಕ ಜಗದ ಪುಸ್ತಕ
ದುಸ್ತರ ಬದುಕಿಗೆ ಆಶಾಕಿರಣ!
ನೀನೇ ರವಿಯು ನೀನೇ ಚ೦ದ್ರನು
ಎನ್ನಯ ಬಾಳಿಗೆ ಸುಜ್ನಾನದಕಿರಣ!!
ಅನುಪಮ ನಿಧಿಯು ನಿನ್ನಯ ಸನ್ನಿಧಿ
ದಿವ್ಯತೆ,ಭವ್ಯತೆ ನಿನ್ನಾ ಮಡಿಲು
ಸ್ತುತಿಸದೆ ತೊರೆದ ಕ್ಷಣಗಳ ಮರೆ ನೀ
ಗತಿಸಿದ ಕಾಲಕೆ ಮನ್ನಿಸು ನನ್ನಾ!!
ಈಶನ ಸುತನೂ ವಿದ್ಯೆಗೆ ಪಿತನೂ
ಮೂಷಿಕವಾಹನ ಮೋದಕಪ್ರಿಯನೂ
ಚಾಮರಕರ್ಣ ವಿಡ೦ಬಿತಸೂತ್ರನೆ

ಕೃಪೆ ಮಾಡೀ ಬೆಳಗಿಸು ಬಾಳನು!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ